ನೀಲ ಕಂಗಳ ಚೆಲುವೆ ಆಕೆ..........! ನೆನಪ ಮಾಲೆಯ ಹೊತ್ತು ನೀಲ ತೀರದ ಮೇಲೆ ಆ ನೀಲ ಕಂಗಳ ಚೆಲುವೆ ಹೆಜ್ಜೆಯನಿಡುತ್ತಿದ್ದಾಳೆ... ! ಆಕೆಯುಟ್ಟಿದ್ದ ನೀಲ ನಿಲುವಂಗಿ ಕಡಲ ನೀಲಿಯ ಜತೆ ಸ್ಪರ್ದೆಯನ್ನೊಡ್ಡುತ್ತಿದೆ.... ಬೀಸುವ ಗಾಳಿಗೆ ಎದೆಯ ಮೇಲಿದ್ದ ಶಾಲು ಮರಳ ನೇವರಿಸುತ್ತಿದೆ.. ಆದರೂ ಆಕೆಗದರ ಪರಿವೆಯೇ ಇದ್ದಂತಿಲ್ಲ..! ಆ ನೀಲಿ ಕಂಗಳಲಿ ಅದೇನೋ ಹುಡುಕಾಟ .. ಕಂಡೂ ಕಾಣದ ನೋವು .. ಭಾರವಾದ ಹೆಜ್ಜೆಯನಿಟ್ಟು ಮುಂದೆ ಸಾಗುತಲಿದೆ ಒಂಟಿ ಪಯಣ ...... ಇನ್ನೊಂದೆಡೆ ಭೋರ್ಗರೆವ ಕಡಲು ... ಉಕ್ಕುಕ್ಕಿ ಬರುವ ಅಲೆಗಳು ತೀರ ಚುಂಬಿಸುವ ಆಸೆಯಲಿ ಮೇಲೇರಿ ಬರುತಲಿವೆ... ಇದೆರಡರ ನಡುವೆ ಆಕೆ......... ನೀಲಿ ಕಂಗಳಲಿ ಗೊಂದಲವಿದೆ. ನಸು ಆತಂಕವಿದೆ ... ಹುಡುಕಾಟವಿದೆ...... ಏಕಾಂಗಿಯ ಭಾವವಿದೆ..... ಒಂಟಿ ಮನ ಕೇಳುತಿದೆ ... ಆ ತಾರೆ ರವಿ ಶಶಿಯು ಜತೆಯಿಲ್ಲವೇ ನಿನಗೆ? "ಎಲ್ಲ ಇದ್ದರು ನಿನಗೆ ಏಕಾಂಗಿಯಾ ಭಾವ ಕಾಡಬಹುದೇ ಹೀಗೆ ಬಿಡು ಚಿಂತೆ ನೋವ"
| ಪೋರ್ಟಲ್ ನಿರ್ಮಾತೃ | krishnaveni krishnaveni |
| ಕೊನೆಯ ಬಾರಿ ಮಾರ್ಪಡಿಸಿದ್ದು | ಅಕ್ಟೋಬರ್ 9, 2009 11:25:30 PM IST |