Welcome, Guest   [ Register | Sign In | Take a tour | Adult Filter: On ]

ಪ್ರಶ್ನೆ..????


ಶೂನ್ಯ ಭಾವಗಳಿಗೆ
ರೆಕ್ಕೆ ಪುಕ್ಕವನಿರಿಸಿ
ಸಂತಸದ ಹಕ್ಕಿಯಾಗಿಸಿ
ನನ್ನ ಒಂಟಿ ಮಾಡಿದೆಯೇಕೆ?

ಅರಿವಾಗದಿರಲು ನಾ ಜಲದ
ಮೀನಲ್ಲ; ಬೆಳ್ಮೋಡ ಮುಗಿಲಲ್ಲ;
ಕಾಮನ ಬಿಲ್ಲಿನ ಚಂಚಲತೆಯೂ ಇಲ್ಲ
ಇಂತು ನನ್ನ ಒಂಟಿಯಾಗಿಸಿದೆಯೇಕೆ?

ನನ್ನ ಮಿಡಿತಕ್ಕೆ ಸ್ಪಂದಿಸದೆ
ಚೆಲ್ಲಾಟವಾಡಿದೆಯೇಕೆ?
ಚಿಂತೆ ತುಂಬಿದ ಮನಕೆ
ಪ್ರಶ್ನೆಯೊಂದನೆ ಬಿಟ್ಟು
ದೂರವಾದೆಯೇಕೆ?
ಬರಲಾರೆಯಾ ಪ್ರಿಯಾ..?
ಮಳೆಯಾಗಿ ....
ಈ ಇಳೆಯ ತೋಯಿಸಲು...
ಇನ್ನೊಮ್ಮೆ, ಮತ್ತೊಮ್ಮೆ, ಮಗದೊಮ್ಮೆ...
-ಕೇವಿ ಕುಂಜಾರು

ಪ್ರತಿಸ್ಪಂದನಗಳು

Re: ಪ್ರಶ್ನೆ..????
Nice one more Pls
Re: ಪ್ರಶ್ನೆ..????
ಕೇವಿಯವರೇ, ಬಹುದಿನಗಳ ನಂತರ ನಿಮ್ಮ "ಪ್ರಶ್ನೆ" ಓದಿ ಸಂತಸವಾಯಿತು. ನಿಮ್ಮ ಬರವಣಿಗೆ ಹೇಗಿ ಮುಂದುವರಿಯಲಿ.
Re: ಪ್ರಶ್ನೆ..????
thank you....
ಹಕ್ಕು ನಿರಾಕರಣೆ