Webdunia: Portal - Search - Mail - Greetings   More >>
Support | Font Download | Feedback
Search  
Welcome, Guest  [ Register | Sign In ]

ಕನವರಿಕೆ ನಿನಗಾಗಿ..


ಸುರಿವ ಮಳೆಗೆ ನೀ ನೆನಪಾಗುವೆ,

ಅರಿಯೆನೆ ನಾ ನಿನ್ನ
ಬಿಂಕ ಬಿನ್ನಾಣವ
ಬಿಡು ಸಾಕು ಸುಮ್ಮನೆ..
ಬಿಗುಮಾನವ..

ಜತೆಯಿರುವೆನೆಂದು
ನಾ ಬಳಿಗೆ ಬರಲು
ಪರಿಮಿತಿಯೇಕೆ ನಮ್ಮೊಳಗೆ?

ಕಿನಿಸಾದರೂ ಕನಸಿಲ್ಲವೇ ನಿನಗೆ
ಯೌವನದ ಸುಖ ಮದಿರೆಯ
ಸವಿಯ ಬೇಕೆಂದು?

ಅರ್ಥವಿಲ್ಲದ,
ಈ ಮುನಿಸೇಕೆ ನಿನಗೆ
ಆಂತರ್ಯವನೇ ನಾ ತೆರೆದಿರಲು

ಬಿಳಿ ಹಾಲ ಮೈ ಚಾಚಿ
ಕೆಂಪು ಹೂಗಳ ಹಾಸಿ
ಮಧು ಮಂಚದಲಿ ನಾ..

ವಾಹ್! ಎಂದು...
ಕಂಪು ಸೂಸುತಿರುವ
ಮಲ್ಲೆ ಹೂವೂ ಮೆಲ್ಲುಸುರುತಿರೆ..

ನಿನಗಾಗಿ ನಾ
ಸರ್ವಾಲಂಕಾರಿಯಾಗಿ
ಕಾಯುತಿರಲು..

ಬಳಿ ಬರಬಾರದೇ ಒಮ್ಮೆ
ಈ ನಿನ್ನ ಕಾಯುತಿರುವ
ಒಂಟಿ ಜೀವಕಾಗಿ..

-ಕೇವಿ ಕುಂಜಾರು

ಹಕ್ಕು ನಿರಾಕರಣೆ