ಪರ್ಣ ಬಣ್ಣ ಕಳೆದುಕೊಂಡಿತ್ತು...
ಅದೇ ಬಿಸಿಲು ,ಅದೇ ಚಳಿ
ಬವಳಿ ಬೆಂಡಾಗಿ
ಒಣಗಿ ,ಒಣಗಿ
ಕಾತರವಿತ್ತು ಮನದಲ್ಲಿ ,
ಹೊಸ ಹೂವು ಹೊಸ ಚಿಗುರು
ವಿದಾಯ ಹೇಳಿಯಾವೆಂದು.
ನಿರೀಕ್ಷೆಯೆಲ್ಲಾ ಮಣ್ಣು ಪಾಲು
ಬತ್ತಿ ಹೋಗಿವೆ ಜೀವ ರಸ
ಉಳಿದಿರುವುದು ಬರಿಯ
ಭ್ರಮನಿರಸ!
ಮತ್ತೆ ಮನ ಕೂಗಿಕೂಗಿ
ಚೀರುತಿದೆ
ಹೇಳ ಬಾರದಿತ್ತೇ?
ಕೊನೆಗೊಂದು ಮಾತು-ನಗು
ಕನಸು ಕಮರುವ ಮೊದಲು
ಬಣ್ಣ ಕಳೆದುಕೊಳ್ಳುವ ಮುನ್ನ!?

ಲೋಡ್ ಆಗುತ್ತಿದೆ......