Webdunia: Portal - Search - Mail - Greetings   More >>
Support | Font Download | Feedback
Search  
Welcome, Guest  [ Register | Sign In ]

ಒಂದು ಸಣ್ಣ ಪ್ರೇಮ ಪ್ರಸಂಗ..


ಆ ಮಳೆಯ ರಾತ್ರಿಯಲ್ಲಿ..
ಇಳೆಯಂತೆ ತೊಯ್ದಿರಲು
ಎಸ್ಟೊಂದು ಸುಖವಿತ್ತು?
ಗೆಳೆಯಾ ನೀ ಜತೆಗಿರಲು..

ಹನಿಹನಿಯತೊಡಗಿತ್ತು
ಕಾರ್ಮೋಡ ಚದುರಿತ್ತು
ನಿನ್ನ ಉಸಿರ ಬಿಸಿಯು ಸೋಕಿ
ಒಡಲಾಳ ಕರಗಿತ್ತು...

ಹಸಿ ಮಣ್ಣ ಒಸರಲ್ಲಿ
ಒಂದೇ ಸೂರಡಿಯಲ್ಲಿ
ನಿನ್ನ ಕಣ್ಣು ನನ್ನ ಸೇರಿ
ಏನೋ ಹೇಳ ಬಯಸಿತ್ತು..

ಆ ಮಿಂಚ ಕಲರವಕೆ
ಆ ಗುಡುಗ ಆರ್ಭಟಕೆ
ಮುದುರಿಕೊಂಡ ನನ್ನ ಮನಕೆ
ನಿನ್ನ ಅಂಗೈಯಾಸರೆಯಿತ್ತು..

ಮುಸುಲಧಾರೆ ನಿಂತಿತ್ತು
ಮುಸುಕು ಹಾದಿ ಸರಿದಿತ್ತು
ಅನತಿ ದೂರದಲ್ಲೊಂದು
ಹಾದಿ ಕವಲು ಕಂಡಿತ್ತು..

ಏನೋ ಕಾಡಿ ಏನೋ ಬೇಡಿ
ಏನೋ ದಾಟಿ ಏನೊ ಮೀಟಿ
ಮಳೆಯ ತಂಪು ಕಚಗುಳಿಯಿಡಲು
ಏನೋ ಅರ್ಥ ಕಂಡಿತ್ತು..


ಮಾತು ಮನದಿ ಉಳಿದಿತ್ತು
ತುಟಿಯು ಮೌನ ಬಯಸಿತ್ತು
ಅರ್ಥವಾಗದೇ ಪ್ರೀತಿ..
ತನ್ನ ಹಾದಿ ಹಿಡಿದಿತ್ತು....
- ಕೇವಿ ಕುಂಜಾರು


ಪ್ರತಿಸ್ಪಂದನಗಳು

Re: ಒಂದು ಸಣ್ಣ ಪ್ರೇಮ ಪ್ರಸಂಗ..
ನವಿರು ಭಾವನೆಗಳನ್ನು ಹೊಮ್ಮಿಸಿದ ಕವನ ಹಿಡಿಸಿತು........ ಅನನ್ಯ
ಹಕ್ಕು ನಿರಾಕರಣೆ