Webdunia: Portal - Search - Mail - Greetings   More >>
Support | Font Download | Feedback
Search  
Welcome, Guest  [ Register | Sign In ]

ನೆನಪಿನ ದೋಣಿಯಲಿ.....

ನೆನಪಿನ ದೋಣಿಯಲಿ ....
ಹುಟ್ಟು ಹಾಯಿಯ ಹಾಕಿ
ನೀಲ ತೀರದ ಮೇಲೆ
ಒಂಟಿ ನಿನ್ನಯ ಪಯಣ..

ಕಲ್ಪನಾ ಲೋಕದಲಿ
ನಿನ್ನ ನೀ ಮರೆತಿರಲು
ಮತ್ತೆ ಅಲೆಗಳು ಬಂದು
ಮುತ್ತುವವೆ ನಿನ್ನ?..

ಅಳುಕದಿರು ಅಂಜದಿರು
ಇರಲಿ ಸಿಹಿ ನೆನಪುಗಳು
ಮುತ್ತಾಗಿ ಉಳಿಯುವುದು
ಮನದ ಚಿಪ್ಪಲ್ಲಿ... !

ಎತ್ತಲೋ ನಿನ್ನ ನೋಟ
ಸುತ್ತಿ ಬಂದಂತಿದೆಯಲ್ಲ
ಅತ್ತಲೋ ಇತ್ತಲೋ
ಎತ್ತ ನಿನ್ನಯ ಪಯಣ?...

ದಿಕ್ಕು ತೋರದೆ ನಾಕ?
ಭೋರ್ಗರೆವ ಕಡಲಲ್ಲಿ
ಮತ್ತೆ ಸಾಗದೆ ನಿನ್ನ
ಸಿಹಿ ನೆನಪ ಪಯಣ...

ಆ ತಾರೆ ರವಿ ಶಶಿಯು
ಜತೆಯಿಲ್ಲವೇ ನಿನಗೆ
ಸಂಧಿಗ್ಢತೆಯೇಕೆ?
ಸಂಗ್ರಾಮವೇಕೆ?...

"ಎಲ್ಲ ಇದ್ದರು ನಿನಗೆ
ಏಕಾಂಗಿಯಾ ಭಾವ
ಕಾಡಬಹುದೇ ಹೀಗೆ?
ಬಿಡು ಚಿಂತೆ ನೋವ"...

- ಕೇವಿ ಕುಂಜಾರು

ಪ್ರತಿಸ್ಪಂದನಗಳು

Re: ನೆನಪಿನ ದೋಣಿಯಲಿ.....
ಭಾವನೆಗಳಿಂದ ಕೂಡಿದ ನಿಮ್ಮ ಕವನ ಮನ ಮುಟ್ಟುವಂತಿದೆ. ಬರೆಯುತ್ತಿರಿ ಹೀಗೆ...ಅಭಿನಂದನೆಗಳು
ಹಕ್ಕು ನಿರಾಕರಣೆ